ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ ದಾಖಲೀಕರಣ ಅಗತ್ಯ : ಡಾ.ಎಂ.ಮೋಹನ ಆಳ್ವ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಜುಲೈ 4 , 2015
ಜುಲೈ 04, 2015

ಯಕ್ಷಗಾನ ದಾಖಲೀಕರಣ ಅಗತ್ಯ : ಡಾ.ಎಂ.ಮೋಹನ ಆಳ್ವ

ಸುಳ್ಯ : ಯಕ್ಷಗಾನವನ್ನು ಸರಿಯಾದ ರೀತಿಯಲ್ಲಿ ದಾಖಲೀಕರಿಸಿದರೆ ಮುಂದಿನ ಪೀಳಿಗೆಗೆ ಯಾವುದೇ ಅಡಚಣೆಯಿಲ್ಲದೆ ತಲುಪುತ್ತದೆ. ರಾಜ್ಯ ಸರ್ಕಾರ ಯಕ್ಷಗಾನ ಕಲೆಯನ್ನು ಕರ್ನಾಟಕದ ರಾಜ್ಯ ಕಲೆಯೆಂದು ಘೋಷಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಮೂಡಬಿದಿರೆಯ ಪದ್ಮಾವತಿ ಕಲಾ ಮಂದಿರದಲ್ಲಿ ಐದು ದಿನ ನಡೆಯುವ ’ಯಕ್ಷಾಯಾನ’ ಕಾರ್ಯಕ್ರಮವನ್ನು ಡಾ.ಎಂ.ಮೋಹನ ಆಳ್ವ ಅವರು ಬುಧವಾರ ಉದ್ಘಾಟಿಸಿದರು. ಲಕ್ಷ್ಮೀಕುಮಾರನ್‌, ಎಂ.ಆರ್‌ ವಾಸುದೇವ, ಶ್ರೀಪತಿ ಭಟ್‌, ದೇವಾನಂದ ಭಟ್‌ ಮತ್ತಿತರರು ಇದ್ದರು.
ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ವತಿಯಿಂದ ಪದ್ಮಾವತಿ ಕಲಾ ಮಂದಿರದಲ್ಲಿ 5 ದಿನ ಗಳ ಕಾಲ ನಡೆಯಲಿರುವ 18 ನೇ ವರ್ಷ ದ ಯಕ್ಷಾಯನ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿದರು.

ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಈಶ್ವರ ಭಟ್ ಆಶೀರ್ವಚನ ನೀಡಿದರು. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

ಕೆ.ವಿ ರಮಣ್ ಅವರು ಅರ್ಚಕ ಅಲಂಗಾರು ದಿ.ಸೀತಾರಾಮ ಭಟ್ ಸಂಸ್ಮರಣ ಭಾಷಣ ಮಾಡಿದರು. ಮಂಗಳೂರು ಎಂಆರ್‌ಪಿಎಲ್‌ನ ಡೆಪ್ಯುಟಿ ಮೆನೇಜರ್ ಲಕ್ಷ್ಮೀ ಕುಮಾರನ್, ಮಂಗಳೂರು ವಿಮಾನ ನಿಲ್ದಾಣ ಮಾಜಿ ನಿರ್ದೇಶಕ ಎಂ.ಆರ್ ವಾಸುದೇವ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಪೃಥ್ವೀರಾಜ್, ಎಂಐಟಿ ಪ್ರಾಧ್ಯಾಪಕ ಉದಯ ಕುಮಾರ್ ಶೆಟ್ಟಿ, ಪಡುಬಿದ್ರೆ ಸ್ಥಾನಿಕ ಬ್ರಾಹ್ಮಣ ಸಭಾದ ನಿರ್ದೇಶಕ ದಿವಾಕರ್ ರಾವ್, ರಾಮಕೃಷ್ಣ ಭಟ್, ಯಕ್ಷಗಾನದ ಪ್ರಾಯೋಜಕರಾದ ರಮೇಶ್ ಭಟ್ ಕದ್ರಿ ಅವರನ್ನು ಗೌರವಿಸಲಾಯಿತು.

ಶ್ರೀ ಯಕ್ಷದೇವ ಮಿತ್ರ ಕಲಾಮಂಡ ಳಿಯ ಕಾರ್ಯಾಧ್ಯಕ್ಷ ಎಂ.ದೇವಾನಂದ ಭಟ್ ಸ್ವಾಗತಿಸಿದರು. ಗೌರವಾಧ್ಯಕ್ಷ ಶ್ರೀಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಮಹಾವೀರ ಪಾಂಡಿ ನಿರೂಪಿಸಿ ದರು. ರವಿಪ್ರಸಾದ್ ಶೆಟ್ಟಿ ವಂದಿಸಿದರು.

500 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಯಕ್ಷಗಾನ, ಶಾಸ್ತ್ರೀಯತೆ ಹೋಲಿಕೆಯಿರುವ ಜನಪದೀಯ ಕಲೆ. ಡಾ.ಮೋಹನ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ


ಕೃಪೆ : Prajavani

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ